Archive for ಜನವರಿ, 2011


ಹೌದು!
ಉತ್ತರ ಸಿಕ್ಕಿದೆ!!
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡಿಗರನ್ನಷ್ಟೇ ಅಲ್ಲ ಇಂಗ್ಲಿಶ್ ಬಲ್ಲವರನ್ನೂ (?!) ಕಾಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ…!

ವರ್ಷ : ೧೯೭೮ (1978)
ಚಿತ್ರ : ಆಪರೇಶನ್ ಡೈಮಂಡ್ ರಾಕೆಟ್
ಹಾಡು : ಇಫ್ (ಈಫ್) ಯು ಕಮ್ ಟುಡೆ..

ಹಾಡಿನ ಮೊದಲ ಕೆಲ ಸಾಲುಗಳು ಇಂತಿವೆ….
If you come today, it’s too Early (ನೀನ್ ಇವತ್ ಬಂದ್ರೆ, ಭಾಳ ಜಲ್ದಿ ಬಂದ್ಹಂಗಾತು)
If you come tomorrow, It’s too late (ನೀವು ನಾಳೆ ಬಂದರೆ, ತಡವಾಗಿ ಬಂದಂತಾಗುತ್ತದೆ)
You pick the time (ಸಮಯವನ್ನು ತಾವೇ ಆಯ್ಕೆಮಾಡುವಂಥವರಾಗಿ)
tick tick tick tick tick tick X2 (ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ X ೨)

“ಸೊ.. ಟುಡೆ ಬಂದ್ರೆ ಜಲ್ದಿ… ಟುಮಾರೋ ಬಂದ್ರೆ ಲೇಟು… ಯಾವಾಗ್ ಬಂದ್ರೆ ಕರೆಕ್ಟು…?!” ಅಂತ ಯೋಚ್ನೆ ಮಾಡ್ತಾ ಇದ್ದಂಥಾ ಎಲ್ಲರಿಗೂ ಉಪಯೋಗ ಆಗ್ಲಿ ಅಂತ ಫುಲ್ ತಲೆ ಕೆಡುಸ್ಕಂಡು ಉತ್ರ ಕಂಡ್ ಹಿಡ್ಡಿದೀನಿ… ನೋಡ್ಕಳಿ..!

ಸೊ… ಸರಿಯಾದ ಸಮಯ “ಈ ರಾತ್ರಿ”

(ಕರತಾಡನ)

ತುಂಬಾ ಧನ್ಯವಾದಗಳು ಗೆಳೆಯರೇ ಹಾಗೂ ಅವರ ಗೆಳತಿಯರೆ… ನಿಮ್ಮ ನಿರಂತರ ಪ್ರೋತ್ಸಾಹ ಹಾಗೂ ಸಹಕಾರದಿಂದ ನಾನು ಈ ಜವಾಬ್ದಾರಿಯನ್ನು ಕೈಗೆತ್ತಿಕೊಂಡು, ಅತೀ ಕ್ಲಿಷ್ಟಕರವಾದ ಪ್ರಮೇಯಗಳನ್ನು ಉಪಯೋಗಿಸಿ, ಈ ಉತ್ತರವನ್ನು ಕಂಡು ಹಿಡಿದು, ಅಜ್ನಾನದಲ್ಲಿದ್ದ (ಅಜ್ಞಾನ ಅಂದಾಗ ನೆನಪಾಯ್ತು.. ಮುಖ್ಯಮಂತ್ರಿಗಳೇ, ಕ್ಷೇಮ ತಾನೇ?) ಈ ಮನುಕುಲಕ್ಕೆ ದಾರಿದೀಪವಾಗಲು ನನಗೆ ಸಾಧ್ಯವಾಯಿತು.

ಇಷ್ಟು ಹೇಳಲು ಅವಕಾಶ ಮಾಡಿಕೊಟ್ಟ ತಮ್ಮೆಲ್ಲರಿಗೂ ವಂದಿಸುತ್ತಾ ನನ್ನ ಈ ಮಾತುಗಳನ್ನು ಮುಗಿಸುತ್ತೇನೆ. ಜೈ ಡೈಮಂಡ್ ರಾಕೆಟ್.

(ಕರತಾಡನ ಮತ್ತೊಮ್ಮೆ)

ಮುಗ್ಸೋಕಿಂತ ಮುಂಚೆ ಈ ಹಾಡನ್ನೊಂದ್ಸಲ ನೋಡಿ… ಈ ಸಾರಿ ಆ ಪ್ರಶ್ನೆ ನಿಮ್ಮ ತಲೆಗೆ ಬರೋಲ್ಲ…!!

 

 

ಹೀಗೂ ಉಂಟು..!!

Advertisements

ನಿಮಗೊಂದು ಹಾಡು ಕೇಳಿಸಬೇಕು…

ಹೀಗೇ ಒಂದು ಐದಾರು ತಿಂಗಳ ಹಿಂದೆ ಮಂಜು ನನ್ನ ಹತ್ತಿರ ಬಂದು “ನಮ್ ಕಾಲೇಜ್ ಫೇರ್ವೆಲ್ ಫಂಕ್ಷನ್ ಗೆ ಒಂದ್ ಹಾಡ್ ಕಂಪೋಸ್ ಮಾಡಿದೀನಿ, ಕೇಳಿ ಹೇಗಿದೆ ಅಂತ ಹೇಳಿ” ಅಂದಾಗ
I was excited!!

ಹಾಡು ಕೇಳಿದಾಗ ‘ಪರ್ವಾಯಿಲ್ಲ’ ಅನ್ನಿಸಿತಾದರೂ “ಮಸ್ತಾಗಿದೆ ಕಣೋ!” ಎಂದೆ… (ತಿಕ್ಲುಗಳನ್ನ ಫ್ರೆಂಡ್ಸ್ ಮಾಡ್ಕಂಡು ನಮ್ಮಂಥಾ ಒಳ್ಳೇ ಹುಡುಗ್ರು ಸುಳ್ಳೆಲ್ಲ ಹೇಳಬೇಕಲ್ಲ?!)

ಆಮೇಲೆ ಆ ಹಾಡನ್ನು ಮರೆತೇ ಬಿಟ್ಟೆ… ಮೊನ್ನೆ ಬಡ್ಡಿಹೈದ ಮಂಜು ಫೇಸ್ ಬುಕ್ಕಲ್ಲಿ ಅದೇ ಹಾಡನ್ನು ಪೋಸ್ಟ್ ಮಾಡೋವರೆಗೂ….

ಈ ಸಾರಿ ಕೇಳಿದಾಗ ಇಷ್ಟವಾಯಿತು… Good job ಮಂಜೂ… ಸಾಹಿತ್ಯ ಬಿಟ್ರೆ ಅಂಥಾ ದೊಡ್ಡ ತಕರಾರೇನೂ (ನನ್ನ ಕಡೆಯಿಂದ) ಇಲ್ಲ…

ನನ್ನ ತಕರಾರೇನಿದ್ದರೂ ಇಂಥ ಕೆಲಸಗಳನ್ನು ಮಾಡಿ, ಸುಮ್ಮನೆ ಇರಲಾಗದೆ ನನಗೆ ತೋರಿಸಿ, “ನೀನೂ ಇದೀಯ… ದಂಡಕ್ಕೆ!!” ಅಂತ ನನ್ನನ್ನು ನಾನೇ ಹಳಿದುಕೊಳ್ಳುವಂತೆ ಮಾಡುವುದರ ಬಗ್ಗೆ!

Butಆದ್ರೆ…. ಹಾಗೆಲ್ಲಾ ಅಂದುಕೊಳ್ಳುವುದಕ್ಕಿಂತ ಮುಂಚೆಯೇ… ನಾವು ಗತಕಾಲದಲ್ಲಿ ಮಾಡಿದ ಮಹತ್ಕಾರ್ಯವೊಂದು ನೆನಪಿಗೆ ಬಂದಿತು…!

“waaaaw!!”
“Oscar stuff mate!!”
ಅಂತ ಯಾರೂ ಹೇಳಲಿಲ್ಲ…!! ಯೂಸ್ ಲೆಸ್ ಫೆಲೋಸ್

“ತೊಂದ್ರೆ ಇಲ್ಲಾರೀ…. ನಮಗೆ ನಮ್ ಅಭಿಮಾನಿಗಳ ಮೆಚ್ಚುಗೆಗಿಂತಾ ದೊಡ್ಡ ಪ್ರಶಸ್ತಿ ಬೇಕೆನ್ರೀ?!” ಅಂತ ನಾನು ಹೇಳೋ ಕಾಲ ಯಾವಾಗ್ ಬರುತ್ತೋ… ಅಂಥಾ ಕಾಲ ಬರೋಕೆ ನಾನ್ ಯಾವ ಜಾದೂ ಮಾಡಬೇಕೋ ಆ ದೇವರೇ ಬಲ್ಲ!

ಆದ್ರೆ ಒಂದು ಮಾತು ಮಾತ್ರ ಸತ್ಯ…

ಈ ನನ್ನ ವೀಡಿಯೋ ನೋಡಿ ಜನ ಮೆಚ್ತಾರೋ ಇಲ್ವೋ ಗೊತ್ತಿಲ್ಲ… ಆದ್ರೆ ಮಂಜುವಿನ ಹಾಡು ಕೇಳಿಸುವ ನೆಪದಲ್ಲಿ ನನ್ನ ವಿಡಿಯೋಗೆ ಹೆಚ್ಚು ನೋಡುಗರನ್ನು ಸೆಳೆಯೋ ಪ್ರಯತ್ನ ಮಾಡ್ತಾ ಇದ್ದೀನಲ್ಲಾ… ಈ ನನ್ನ ಕುತಂತ್ರ ಜಾಣತನವನ್ನಂತೂ ಕೆಲವರಾದರೂ ಮೆಚ್ಚುತ್ತಾರೆ!

ನಮಗೆ ಅಷ್ಟೇ ಸಾಕು ಬಿಡ್ರೀ!!