(ವಿ. ಸೂ : ಈ ಬ್ಲಾಗಿನ ಶೀರ್ಷಿಕೆ ನೋಡಿ ನೀವು ಇದನ್ನು ಓದೋ ಮನಸ್ಸು ಮಾಡಿದೀರಿ ಅಂತಾದ್ರೆ….ನಿಮಗೆ ಖಂಡಿತಾ ನಿರಾಶೆ ಕಾದಿದೆ!!
ಕ್ಷಮಿಸಿ, ಮಾರುಕಟ್ಟೆಯಲ್ಲಿ ಭಯಂಕರ ಸ್ಪರ್ಧೆ, ಓದುಗರನ್ನ ಸೆಳೆಯಲಿಕ್ಕೆ ಎನಾದ್ರೂ ಗಿಲ್ಮಿಟ್ ಮಾಡಬೇಕಲ್ವಾ? ಹಾಗಾಗಿ ಶೀರ್ಷಿಕೆಯನ್ನು ಹಾಗೆ over-exaggerate ಮಾಡಬೇಕಾಯ್ತು!!)

ವಿಷಯಕ್ಕೆ ಬರ್ತಾ ಇದೀನಿ…

ಕನ್ನಡ ಚಿತ್ರಗೀತೆಗಳಲ್ಲಿರುವ ಅನರ್ಥಗರ್ಭಿತ ಹಾಡುಗಳ ಜೊತೆಗೇ ಅರ್ಥಗರ್ಭಿತ ಹಾಡುಗಳೂ ಇವೆ! (uncle promise! ನಂಗೂ first time ಕೇಳ್ದಾಗ ಹಿಂಗೇ, ನಿಮ್ ಥರಾನೇ shock ಆಗಿತ್ತು you see!!)
ಅವುಗಳಲ್ಲಿ ಕೆಲ ಅನರ್ಘ್ಯ ರತ್ನಗಳನ್ನ ಚಿತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದ್ದೇನೆ… ನೀವೇ ನೋಡ್ಕಳಿ!

ಒಹ್!

ವಾವ್!

ಫಂಟಾಶ್ಟಿಕ್!!

ಅಂತ ಬಾಯ್ ಬಾಯ್ ಬಿಟ್ಕೋಳೋಕಿಂತ ಮುಂಚೆ ಒಂದ್ ಚಿಕ್ಕ flashback ಓದ್ಕೊಂಡ್ ಬಿಡಿ…

ಸ್ವಲ್ಪ ದಿವಸಗಳ ಮುಂಚೆ ನಾನು ಕ್ರಿಶ್ ಅಶೋಕ್ ಅವರ ಈ ಬ್ಲಾಗನ್ನ ಓಡಿ ಬಿದ್ದು ಬಿದ್ದು ನಕ್ಕೆ!! (true story!!)

ಸರಿ, ನಮ್ ಕನ್ನಡದ ಎಷ್ಟೋ ಹಾಡುಗಳು ಅರ್ಥಗರ್ಭಿತವಾಗಿಯೂ, ಅನರ್ಥಗರ್ಭಿತವಾಗಿಯೂ ಇರುವಂತಹ ಈ ಸಂದರ್ಭದಲ್ಲಿ, ನನ್ನ ತಲೆಗೆ ತೋಚಿದ ಕೆಲ ಹಾಡುಗಳ ವ್ಯಾಖ್ಯಾನ ಮಾಡದೆ ಹೋದರೆ ನಾನು ತಿಂದಿದ್ದು ಜೀರ್ಣ ಆಗೋದಾದ್ರೂ ಹೇಗೆ?!
ನೀವೇ ಯೋಳಿ!!

Advertisements