“ಇವ್ನು ಈ ಕೆಲ್ಸಾನ ತುಂಬಾ ಮುಂಚೆನೇ ಮಾಡ್ಬೇಕಿತ್ತು…”
ಹಾಗಂತ ಕನಿಷ್ಠ ಮೂರ್ ಜನಾನಾದ್ರೂ ಅಂದ್ಕೊಳ್ತಾ ಇರ್ತಾರೆ..!
“ಹೌದಲ್ವಾ…? ನಾನ್ ಯಾಕ್ ಇಷ್ಟ್ ತಡವಾಗಿ blog ಬರೆಯೋಕೆ ಶುರು ಮಾಡ್ದೆ?” ಅಂತ ನನ್ನನ್ನ ನಾನು ಸಾವ್ರ ಸಾರಿ ಕೇಳ್ಕೊಂಡ್ರೂ  ಒಂದು ಒಳ್ಳೇ, convincing ಅನ್ಸೋ ಉತ್ರ ಸಿಗ್ತಾ ಇಲ್ಲ! (“ನೀನು ಶುದ್ಧ ಸೋಮಾರಿ…… ಅದ್ಕೇ!!” ಅಂತ ಅಂತರಾತ್ಮ ಬಡಕೊಳ್ತಾ ಇದೆ… convince ಆಗೋದು ನಂಗೆ ಬಿಟ್ಟಿದ್ದು ಅಲ್ವಾ?! ಹಾಗಾಗಿ ನನ್ನದು ಅದರೆಡೆಗೆ “ದಿವ್ಯ ನಿರ್ಲಕ್ಷ” ಹಾಗೂ “ಜಾಣ ಕಿವುಡು”!!)
ಇಂತಿರ್ಪ ಈ ಸಂದರ್ಭದೋಳ್ ನಾನು “ಯೋಚನೆ ಮಾಡು”ವಂತಹ ಅನಾರೋಗ್ಯಕರ ಅಭ್ಯಾಸಗಳನ್ನು ಬದಿಗೊತ್ತ್ತಿ… ನಮ್ಮ ಆಂಗ್ಲ ಬಾಂಧವರು ನಮ್ಮಂತಹ ಸೋಮಾರಿಗಳಿಗಾಗಿ “ಚೈತನ್ಯದ ಬುಗ್ಗೆ”ಗಳಿಗಾಗಿ ರಚಿಸಿರುವ ವಾಕ್ಯವನ್ನು ಇಲ್ಲಿ ಉಲ್ಲೇಖಿಸಿ ನನ್ನ ಪ್ರಥಮ blog ಅನ್ನು ಮುಗಿಸುತ್ತೇನೆ…

“better late than never!!”

Advertisements